ಬಿಲ್ಕೆರೂರಿನ ಹೊರವಲಯದಲ್ಲಿ ಶ್ರೀ ಷ.ಬ್ರ. ಮಹಾಂತಲಿಂಗ ಶಿವಾಚಾರ್ಯಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಬಿಲ್ವಾಶ್ರಮ ಹಿರೇಮಠವುಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಮಹಾಂತಲಿಂಗ ಶಿವಾಚಾರ್ಯರು ಮಹಾನ್ ಹಠಯೋಗಿಗಳಾಗಿದ್ದು ಆಧ್ಯಾತ್ಮಿಕ ಸಾಧಕರಾಗಿದ್ದರೆಂದು ತಿಳಿದುಬರುತ್ತದೆ. ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಬಂದಗುರುಗಳ ಕಾಲಮಾನದ ಬಗ್ಗೆ ಸ್ಪಷ್ಟತೆವಿಲ್ಲವಾದರೂ ಲಭ್ಯವಿರುವ ಮಾಹಿತಿಗಳ ಆಧಾರದಮೇಲೆ ಈಗಿನ ಗುರುಗಳು 9ನೆಯವರೆಂದು ಹೇಳಬಹುದು.ಶ್ರೀಮಠದ ಪರಂಪರೆಯಲ್ಲಿ ಬರುವ ಶ್ರೀ ಕರವೀರೇಶ್ವರ ಶಿವಾಚಾರ್ಯಸ್ವಾಮಿಗಳು ಪವಾಡಪುರುಷರಾಗಿದ್ದು ಜನಮಾನಸದಲ್ಲಿ ಬೇರೂರಿದ್ದಾರೆ ಹಾಗೂ ಇವರತೋರುಗದ್ದುಗೆಗಳು ಈ ಭಾಗದ ನಾನಾ ಕಡೆಗಳಲ್ಲಿ ಕಾಣಸಿಗುತ್ತಿದ್ದು ಪೂಜಿಸಲ್ಪಡುತ್ತಿವೆ.ನಂತರದ ಪರಂಪರೆಯಲ್ಲಿ ಬರುವ ಎಲ್ಲಾ ಶ್ರೀಗಳು ತಮ್ಮ ಅಧಿಕಾರಾವಧಿಯಲ್ಲಿ ಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಮುನ್ನಡೆಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ತಮ್ಮಹನ್ನೆರಡನೇ ವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಕ್ಕೆ ಬಂದು ನಂತರ ವಿಜಯಪುರ,ಹುನಗುಂದ, ಕೊಟ್ಟೂರು ಬಸವೇಶ್ವರ ಪಾಠಶಾಲೆ ಹಾಗೂ ಬಳ್ಳಾರಿ ಕರಡೆಪ್ಪನವರ ಪಾಠಶಾಲೆಗಳಲ್ಲಿ ಸಂಸ್ಕøತ, ವೇದೋಪನಿಷತ್ತು ಮುಂತಾದವುಗಳಲ್ಲಿ ಪರಿಣತಿ ಗಳಿಸಿ, ಉಜ್ಜಯಿನಿಯಜಗದ್ಗುರುಗಳ ಆಶ್ರಯದಲ್ಲಿ ಯೋಗಸಾಧನೆಯನ್ನು ಮಾಡಿದರು. ಶ್ರೀಮಠಕ್ಕೆ ಹಿಂತಿರುಗಿದಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು 1999ರ ಜನವರಿ24ರಲ್ಲಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಹಿರಿಯ ಗುರುಗಳ ಹಾದಿಯಲ್ಲಿಯೇಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳುಜೇಷ್ಠಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವ ನಡೆಸುತ್ತಿದ್ದು ಅಪಾರಸಂಖ್ಯೆಯ ಭಕ್ತರು ಪಾಲ್ಗೊಂಡು ಗುರುಗಳ ದರ್ಶನ ಪಡೆಯುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1975
Place :
ಬಿಲ್ಕೆರೂರು, ಬಾಗಲಕೋಟೆ ತಾ||
Pattadikara :
24-1-1999
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ, ವಿಶೇಷ ಪೂಜೆ.
ಬಸವ ಜಯಂತಿ ಆಚರಣೆ
ಜೇಷ್ಠ ಶುದ್ಧ ಚತುರ್ದರ್ಶಿಗೆ ಶ್ರೀ ಹಿರಿಯ ಗುರುಗಳ
ಪುಣ್ಯಾರಾಧನೆ, ವಿವಿಧ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ
ಹಾಗೂ ವಿವಿಧ ಕಾರ್ಯಕ್ರಮಗಳು.
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.
ಶ್ರೀ ಬಿಲ್ವಾಶ್ರಮ ಹಿರೇಮಠ
Institutions
ಎಲ್.ಕೆ.ಜಿ. / ಯು.ಕೆ.ಜಿ. ಶಾಲೆ
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ಬಿಲ್ವಾಶ್ರಮ ಹಿರೇಮಠ
ಬಿಲ್ಕೆರೂರು - 587 115
ಬಾಗಲಕೋಟೆ ತಾ|| ಜಿ||