ಬಾಗಲಕೋಟೆ ನಗರದ ಕಾರಿಹಳ್ಳ ಪ್ರದೇಶದಲ್ಲಿ 1977ರಲ್ಲಿ ಪರಮಪೂಜ್ಯ ಶ್ರೀಶರಣಬಸವ ಅಪ್ಪಗಳಿಂದ ಸ್ಥಾಪಿತಗೊಂಡಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನುಸನ್ಮಾರ್ಗದಲ್ಲಿ ಕೊಂಡೊಯ್ಯಲು ಯಶಸ್ವಿಯಾಗಿದೆ. ಶ್ರೀಮಠಕ್ಕೆ ಶ್ರೀ ಶರಣಬಸವೇಶ್ವರ ಮಠವೆಂದೂ ಸಹ ಕರೆಯಲಾಗುತ್ತದೆ.ಶ್ರೀ ಶರಣಬಸವ ಅಪ್ಪಗಳು ಶರಣತತ್ವದಲ್ಲಿ ಅಪಾರ ನಂಬಿಕೆ ಇಟ್ಟವರು. ಶ್ರೀಗಳುಶರಣ ತತ್ವಗಳನ್ನು ಪರಿಣಾಮಕಾರಿಯಾಗಿ ಭಕ್ತರಲ್ಲಿ ಪಸರಿಸುವ ಮೂಲಕ ವೀರಶೈವ ಧರ್ಮವನ್ನು ಬೆಳೆಸುವ ಜೊತೆಯಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದಾರೆ. ಶ್ರೀ ಶರಣಬಸವ ಅಪ್ಪಗಳು ಭಕ್ತರಲ್ಲಿನಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ಬಹಳವಾಗಿ ಶ್ರಮಿಸಿದರು.ಶ್ರೀಗಳು ನಾಗರಪಂಚಮಿಯಂದು ಹುತ್ತಕ್ಕೆ ಎರೆಯುವ ಹಾಲನ್ನು ಅದರ ಬದಲುಬಡರೋಗಿಗಳಿಗೆ ನೀಡುವಂತೆ ಭಕ್ತರಿಗೆ ಪ್ರೇರೇಪಣೆ ನೀಡುತ್ತಿದ್ದರು. ಹಾಗೂ ಶ್ರೀ ಸಿದ್ಧರಾಮಜ್ಯೋತಿಯ ಅಭಿಯಾನದೊಂದಿಗೆ ಸಂಚಾರ ಕೈಗೊಂಡು ಮೂಢನಂಬಿಕೆಗಳನ್ನು ತಮ್ಮಜೋಳಿಗೆಗೆ ಹಾಕಿಸುವ ಕಾರ್ಯಕ್ರಮ ಮಾಡುತ್ತಿದ್ದರು. ಶ್ರೀಗಳು ಭಕ್ತರಲ್ಲಿ ಸಾಮಾಜಿಕಅರಿವನ್ನು ಮೂಡಿಸಲು ತಮ್ಮ ಜೀವನಪರ್ಯಂತ ಶ್ರಮಿಸಿ 1995ರಲ್ಲಿ ಲಿಂಗೈಕ್ಯರಾದರು.ಇವರ ತರುವಾಯ ಶ್ರೀಮಠದ ಅಧಿಕಾರವನ್ನು 1996ರಲ್ಲಿ ವಹಿಸಿಕೊಂಡಹಿಂದಿನ ಶ್ರೀಗಳಾದ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಗುರುಗಳಂತೆಯೇ ಶರಣತತ್ವಪರಿಪಾಲಕರಾಗಿ ಶ್ರೀಮಠವನ್ನು ಅಭಿವೃದ್ಧಿಪಡಿಸಿದರು. ಶ್ರೀಗಳು ಸಮಾಜವನ್ನುಸಂಘಟಿಸುವ ಕಾರ್ಯದಲ್ಲಿ ತೊಡಗಿಕೊಂಡು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಜ. ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು2010ರ ಆಗಸ್ಟ್ 29ರಲ್ಲಿ ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡರು. ಶ್ರೀಗಳು ನಾಡಿನಾದ್ಯಂತಸಂಚರಿಸುತ್ತಾ ಭಕ್ತರನ್ನು ಸಂಘಟಿಸುವ ಕಾರ್ಯ ಕೈಗೊಂಡಿದ್ದು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಗಳು ಭೋವಿ ಸಮಾಜದ ಏಳಿಗೆಗಾಗಿಶ್ರಮಿಸುವುದರೊಂದಿಗೆ ಸರ್ವ ಜನಾಂಗಗಳನ್ನೂ ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಜ. ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು
Date of Birth :
18-7-1986
Place :
ದಾವಣಗೆರೆ, ದಾವಣಗೆರೆ ಜಿ||
Pattadikara :
28-8-2010
Photo :
Programs
ಪ್ರತಿ ಅಮವಾಸ್ಯೆಗೆ 'ಬೆಳಕಿನೆಡೆಗೆ' ಕಾರ್ಯಕ್ರಮ
ಸಂಕ್ರಾಂತಿಗೆ ಶ್ರೀ ಸಿದ್ಧರಾಮೇಶ್ವರ ಜಯಂತಿ
ಶಿವರಾತ್ರಿಗೆ ಜಾತ್ರಾ ಮಹೋತ್ಸವ
ಬುದ್ಧ, ಬಸವ, ಡಾ. ಅಂಬೇಡ್ಕರ್ ಜಯಂತಿಗಳ ಆಚರಣೆ
ಶ್ರಾವಣ ಮಾಸದಲ್ಲಿ 'ಅರ್ಚನೆ, ಅರ್ಪಣೆ, ಅನುಭಾವ'
ನಿತ್ಯ ಕಾರ್ಯಕ್ರಮಗಳು
ನವೆಂಬರ್ 1 ರಂದು ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೆ
ಹಾಗೂ ಕನ್ನಡ ರಾಜ್ಯೋತ್ಸವ.
Photos
Full Address Kannada
ಶ್ರೀ ಶರಣಬಸವೇಶ್ವರ ಮಠ
ಹಳೇ ಪ್ರವಾಸಿ ಮಂದಿರ ಹತ್ತಿರ, ಕಾರಿಹಳ್ಳ
ಬಾಗಲಕೋಟೆ - 587 101