Shree Basavalingeshwara Matha

Shree Basavalingeshwara Matha

ಶ್ರೀ ಬಸವಲಿಂಗೇಶ್ವರ ಮಠ

Average Reviews

Description

ಶ್ರೀ ಬಸವಲಿಂಗೇಶ್ವರ ಮಠ

ಕರ್ತೃ – ಶ್ರೀ ಷ.ಬ್ರ. ಗುರುಬಸವಲಿಂಗ ಮಹಾಸ್ವಾಮಿಗಳು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಯಂಡಿಗೇರಿ ಗ್ರಾಮದಲ್ಲಿ1930ರಲ್ಲಿ ಶ್ರೀ ಷ.ಬ್ರ. ಗುರುಬಸವಲಿಂಗ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಬಸವಲಿಂಗೇಶ್ವರ ಮಠವು ವಿಜಯಪುರ ಜಿಲ್ಲೆ, ಬಸವನಬಾಗೇವಾಡಿ ತಾಲ್ಲೂಕಿನಮಸೂತಿಯ ಶ್ರೀ ಜಗದೀಶ್ವರ ಹಿರೇಮಠದ ಶಾಖಾಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬರುತ್ತಿದ್ದು ಶ್ರೀ ಕಾಶಿ ಪೀಠದ ಪರಂಪರೆಯನ್ನು ಪಾಲಿಸುತ್ತಿದೆ.ಶ್ರೀ ಗುರುಬಸವಲಿಂಗ ಸ್ವಾಮಿಗಳು ವಿಜಯಪುರ ಜಿಲ್ಲೆ, ಮಸೂತಿಯಹಿರೇಮಠದಲ್ಲಿ 1894ರಲ್ಲಿ ಜನಿಸಿದರು. ಸೊಲ್ಲಾಪುರದ ವಾರದ ಮಲ್ಲಪ್ಪನವರ ಪಾಠಶಾಲೆಯಲ್ಲಿ ವೈದಿಕ, ಜ್ಯೋತಿಷ್ಯವನ್ನು ಅಧ್ಯಯನ ಮಾಡಿದ ಶ್ರೀಗಳು ಮುಂದೆ ಉಜ್ಜಯಿನಿಯಲ್ಲಿಜಗದ್ಗುರುಗಳಿಂದ ಶಿವದೀಕ್ಷೆಯನ್ನು ಪಡೆದು ಅವರಲ್ಲಿಯೇ 12 ವರ್ಷಗಳ ಕಾಲ ವೇದ,ಆಗಮ, ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು.ಶ್ರೀಗಳು ಮುಂದೆ ಸಂಸಾರ ಬಂಧನಕ್ಕೆ ಒಳಗಾದರೂ ತಮ್ಮ ಆಧ್ಯಾತ್ಮ ಸಾಧನೆಗೆಯಾವುದೇ ಚ್ಯುತಿ ಬಾರದಂತೆ ನಿತ್ಯ ಲಿಂಗಪೂಜೆಯಲ್ಲಿ ತೊಡಗಿಕೊಂಡಿರುತ್ತಿದ್ದರು. ಇವರಅನುಷ್ಠಾನಕ್ಕೆ ಮಾರುಹೋದ ಭಕ್ತರು ಇವರಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ನಂತರ ಶ್ರೀಗಳು ಅಲ್ಲಿಂದ ಸಂಚಾರ ಹೊರಟು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಾಎಲ್ಲರಲ್ಲಿಯೂ ನೀತಿ, ಪ್ರೀತಿ, ಭಾವೈಕ್ಯತೆಯನ್ನು ಬೆಳೆಸಿದರು. ಹೀಗೆ ಸಂಚಾರ ಮಾಡುತ್ತಾಯಂಡಿಗೇರಿಗೆ ಆಗಮಿಸುವ ಶ್ರೀಗಳು ಇಲ್ಲಿಯ ಭಕ್ತರಿಗೆ ಧಾರ್ಮಿಕ ಸಂಸ್ಕಾರ ನೀಡುತ್ತಾಅವರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದರು. ಇಲ್ಲಿ ಇವರ ಪ್ರವಚನ ಕೇಳಲುಜನ ತಂಡೋಪತಂಡವಾಗಿ ಬರುತ್ತಿತ್ತು. ಮುಂದೆ ಮತ್ತೆ ಸಂಚಾರ ಹೊರಡುವ ಶ್ರೀಗಳುಚಿತ್ರದುರ್ಗ ಬಳಿಯ ದೊಡ್ಡಸಿದ್ದವನಹಳ್ಳಿಯಲ್ಲಿ ನೆಲೆನಿಂತು ಲಿಂಗೈಕ್ಯರಾದರು.ಶ್ರೀಗಳ ಗದ್ದುಗೆಯು ದೊಡ್ಡಸಿದ್ದವನಹಳ್ಳಿಯಲ್ಲಿ ನಿರ್ಮಿತಗೊಂಡಿದ್ದುಪೂಜ್ಯನೀಯವಾಗಿದೆ. ಇವರ ಶಿಷ್ಯರು ಕರ್ನಾಟಕಾಂಧ್ರ ಮಹಾರಾಷ್ಟ್ರಗಳಲ್ಲಿಯೂ ಇದ್ದುಜನಮಾನಸದಲ್ಲಿ ಇಂದಿಗೂ ಬೇರೂರಿದ್ದಾರೆ. ಪ್ರಸ್ತುತ ಶ್ರೀಮಠವನ್ನು ಮಸೂತಿಯ ಶ್ರೀಜಗದೀಶ್ವರ ಹಿರೇಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು ಧಾರ್ಮಿಕಆಚರಣೆಗಳೊಂದಿಗೆ ಅಭಿವೃದ್ಧಿಗೊಳಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-6-1969
Place :
ಕೂಡಗಿ,ಬಸವನಬಾಗೇವಾಡಿ ತಾ||
Pattadikara :
16-5-1991
Photo :

Programs

ಮೇ 11ರಂದು ಕರ್ತೃಗುರುಗಳ ಪುಣ್ಯಾರಾಧನೆ,
15ದಿನಗಳ ಕಾಲ ಪುರಾಣಪ್ರವಚನ, ರುದ್ರಾಭಿಷೇಕ ಹಾಗೂ ಕೊನೆಯ ದಿನ ಭಜನೆ, ನಾಟಕ, ಪುರಾಣ ಮಂಗಲ.
ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ನಿತ್ಯ ಭಜನೆ.
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.

Photos

Full Address Kannada

ಶ್ರೀ ಬಸವಲಿಂಗೇಶ್ವರ ಮಠ
ಯಂಡಿಗೇರಿ - 587 206
ಬಾದಾಮಿ ತಾ||, ಬಾಗಲಕೋಟೆ ಜಿ||

Map

Near by Places

ಗದ್ದನಕೇರಿ - 20 ಕಿ.ಮೀ
ಬಾದಾಮಿ - 22 ಕಿ.ಮೀ.
ಬಾಗಲಕೋಟೆ - 30 ಕಿ.ಮೀ.

Statistic

25 Views
0 Rating
0 Favorite
0 Share
error: Content is protected !!