ಕರ್ತೃ – ಶ್ರೀ ಷ.ಬ್ರ. ಕಾಡಸಿದ್ದೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಗುಳೇದಗುಡ್ಡ ಪಟ್ಟಣದ ಹೊಸಪೇಟೆಬಡಾವಣೆಯಲ್ಲಿ ಸುಮಾರು ಸಹಸ್ರ ವರ್ಷಗಳ ಹಿಂದೆ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳಿಂದ ಹಡಗಲಿ ಗ್ರಾಮದಲ್ಲಿ ಸ್ಥಾಪಿತಗೊಂಡು ನಂತರ ಇಲ್ಲಿಗೆ ಸ್ಥಳಾಂತರಗೊಂಡಿರುವ ಶ್ರೀಮರಡಿ ಮಠವು ಅಸ್ತಿತ್ವದಲ್ಲಿದ್ದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವೆನಿಸಿದೆ.ಕರ್ತೃಗುರುಗಳು ಆಂದ್ರಪ್ರದೇಶ ಭಾಗದವರೆಂದು ಹೇಳಲಾಗಿದ್ದು ಆಧ್ಯಾತ್ಮಿಕಸಾಧನೆಗೈದು ಲೋಕಸಂಚಾರ ಮಾಡುತ್ತಾ ಜನರಿಗೆ ಸನ್ಮಾರ್ಗ ತೋರುತ್ತಾ ಬಾಗಲಕೋಟೆಜಿಲ್ಲೆ ಹಡಗಲಿಯ ಹೊರಬಾಗದ ಮಲಪ್ರಭೆ ನದಿ ತೀರದಲ್ಲಿ ಅನುಷ್ಠಾನಗೊಂಡು ಜನರಲ್ಲಿಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ್ದರು. ಶ್ರೀಗಳಿಂದ ಪ್ರಭಾವಿತರಾದ ಭಕ್ತರು ಶ್ರೀಗಳಿಗೋಸ್ಕರಶ್ರೀಮಠ ಕಟ್ಟಿಸಿಕೊಟ್ಟು ಪುನೀತರಾಗುತ್ತಾರೆ ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ದಿದ್ದರು.ಶ್ರೀಮಠದ ಪರಂಪರೆಯಲ್ಲಿ ಕರ್ತೃಗುರುಗಳ ನಂತರ ಬಂದ ಎಲ್ಲಾ ಗುರುಗಳುಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಎಂಬ ಹೆಸರಿನಿಂದಲೇ ಕರೆಯಲ್ಪಟ್ಟಿದ್ದು ವಿಶೇಷ.ಕರ್ತೃಗುರುಗಳಾದ ನಂತರದ 9ನೇ ಶ್ರೀಗಳಾದ ಶ್ರೀ ಕಾಡಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳು ಹಡಗಲಿ ಗ್ರಾಮದಿಂದ ಸಂಚಾರ ಹೊರಟು ಗುಳೇದಗುಡ್ಡ ಹೊರಬಾಗದಕೋಟೆಕಲ್ಲಿನ ಸಮೀಪದಲ್ಲಿ ಭಕ್ತರ ಆಶಯದಂತೆ ಅವರ ಸಹಕಾರದಿಂದ ಶ್ರೀಮಠವನ್ನುಸ್ಥಾಪಿಸಿದ್ದು ಹಡಗಲಿಯ ಮೂಲ ಮಠದ ಆಡಳಿತವನ್ನು ಇಲ್ಲಿಗೆ ಸ್ಥಳಾಂತರಿಸಿದರು.ಈಗಿನ ಹಿರಿಯ ಶ್ರೀಗಳಾದ 10ನೇ ಶ್ರೀ ಕಾಡಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳು 1961ರ ಏಪ್ರಿಲ್ 21ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಶ್ರೀಮಠದ ಪ್ರಸಿದ್ಧಿಗೆ ಕಾರಣರಾಗಿದ್ದಾರೆ.ಗುಳೇದಗುಡ್ಡದ ಹೊರಭಾಗದಲ್ಲಿದ್ದ ಶ್ರೀಮಠವನ್ನು ಭಕ್ತರ ಭಕ್ತಿಪೂರ್ವಕ ಒತ್ತಾಯಕ್ಕೆಮಣಿದು ಊರ ಒಳಗೆ ಹೊಸಪೇಟೆ ಬಡಾವಣೆಯಲ್ಲಿ ನೂತನ ಮಠವನ್ನು ನಿರ್ಮಿಸಿಸ್ಥಳಾಂತರಿಸಿದ್ದಾರೆ. ಈ ಮಠದಿಂದಲೇ ಎಲ್ಲಾ ಶಾಖಾ ಮಠಗಳ ಆಡಳಿತವನ್ನುನಡೆಸಿಕೊಂಡು ಬರುತ್ತಿರುವ ಶ್ರೀಗಳು 2013ರ ಫೆಬ್ರವರಿ 15ರಂದು ಶ್ರೀಮಠಕ್ಕೆ ತಮ್ಮಉತ್ತರಾಧಿಕಾರಿಗಳನ್ನಾಗಿ 11ನೇ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
2-1-1938
Place :
ಗುಳೇದಗುಡ್ಡ, ಬಾದಾಮಿ ತಾ||
Pattadikara :
15-2-2013
Photo :
Swamiji Name :
ಶ್ರೀ ಷ.ಬ್ರ. ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
2-1-1938
Place :
ಗುಳೇದಗುಡ್ಡ, ಬಾದಾಮಿ ತಾ||
Pattadikara :
19-1-1998
Photo :
Programs
ಕಮತಗಿ ಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿ.
ಚೈತ್ರ ಬಹುಳ ಚತುರ್ದಶಿಗೆ 9ನೇ ಶ್ರೀಗಳ ಪುಣ್ಯಾರಾಧನೆ, ಜಾತ್ರೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ಕೊನೆಯ ದಿನ ಭಾದ್ರಪದ ಶುದ್ಧ ಪ್ರತಿಪದಕ್ಕೆ ರಥೋತ್ಸವ.
ಕಾರ್ತೀಕ ಮಾಸದಲ್ಲಿ (ಹೊಸ್ತಿಲ ಹುಣ್ಣಿಮೆಗೆ ಮುಳ್ಳೂರು ಶಾಖಾಮಠದಲ್ಲಿ ರಥೋತ್ಸವ.
ದೀಪಾವಳಿ ಪಾಡ್ಯಕ್ಕೆ ಬಾದಾಮಿ ತಾ|| ಹೊಸೂರಲ್ಲಿ ರಥೋತ್ಸವ.
ಯುಗಾದಿ ಪಾಡ್ಯಕ್ಕೆ ಕಳಕಾಪುರ ಮಠದಲ್ಲಿ ರಥೋತ್ಸವ