ಕರ್ತೃ – ಶ್ರೀ 1008 ಜ. ಶ್ರೀ ಗುರುಸಿದ್ಧ ಪಟ್ಟಾದಾರ್ಯ ಮಹಾಸ್ವಾಮಿಗಳು
ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲ್ಲೂಕಿನ ಗುಳೇದಗುಡ್ಡ ಪಟ್ಟಣದಮಧ್ಯಬಾಗದಲ್ಲಿ 1937ರ ಡಿಸೆಂಬರ್ 27ರಂದು ಶ್ರೀ 1008 ಜಗದ್ಗುರು ಗುರುಸಿದ್ದಪಟ್ಟಾದಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಜಗದ್ಗುರು ಗುರುಸಿದ್ದೇಶ್ವರಬೃಹನ್ಮಠವು ತನ್ನ ಧಾರ್ಮಿಕ ಆಚರಣೆಗಳು ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಈಭಾಗದ ಪ್ರಮುಖ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ.ಕರ್ತೃಗುರುಗಳಾದ ಶ್ರೀ ಗುರುಸಿದ್ದ ಪಟ್ಟಾದಾರ್ಯ ಸ್ವಾಮಿಗಳು ಧಾರ್ಮಿಕಚಿಂತಕರು ಮಹಾನ್ ಧರ್ಮನಿಷ್ಠರು ಆಗಿದ್ದರು. ಶ್ರೀಗಳು ಅಕ್ಕಲಕೋಟೆಯ ಶ್ರೀ ರೇವಣಸಿದ್ದಶರಣರ ಪ್ರೇರಣೆಯಂತೆ ಗುಳೇದಗುಡ್ಡಕ್ಕೆ ಬಂದು ಶ್ರೀಮಠವನ್ನು ಸ್ಥಾಪಿಸಿದ್ದಾರೆ. ಕಾಶಿಯಲ್ಲಿಧಾರ್ಮಿಕ ಶಿಕ್ಷಣವನ್ನು ಪಡೆದ ಶ್ರೀಗಳು “ವೇದಾಂತ ಆಧ್ಯಾತ್ಮ ಕೇಸರಿ” ಎಂಬ ಬಿರುದನ್ನುಪಡೆದು ನಾಡಿನಾದ್ಯಂತ ಶರಣರ ತತ್ವ ಆಚರಣೆಗಳನ್ನು ಪ್ರಚುರಪಡಿಸಿದರು. ಶ್ರೀಗಳು ತಮ್ಮಜೀವಿತಾವಧಿಯಲ್ಲಿಯೇ 1979ರ ಜೂನ್ 19ರಲ್ಲಿ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡು ಪಟ್ಟಾಧಿಕಾರದ ಅನುಗ್ರಹ ನೀಡಿದರು.ಶ್ರೀ ಬಸವರಾಜ ಪಟ್ಟಾದಾರ್ಯ ಸ್ವಾಮಿಗಳು ಹಿರಿಯಗುರುಗಳ ಆಶಿರ್ವಾದಬಲದಿಂದ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳುಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೊತ್ತರ ಪದವಿ ಪಡೆದವರಾಗಿದ್ದು ತಮ್ಮ ಚಿಂತನೆಗಳಿಂದ ಭಕ್ತರನ್ನು ಸನ್ಮಾರ್ಗದತ್ತ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಅಧಿಕಾರಕ್ಕೆ ಬಂದ ನಂತರಮಠವನ್ನು ಅಭಿsವೃದ್ಧಿಪಡಿಸಿ ನೂತನ ಕಟ್ಟಡ ನಿರ್ಮಿಸಿದ್ದಾರೆ.
ಶ್ರೀಗಳು ಉತ್ತಮ ವಾಗ್ಮಿಗಳಾಗಿದ್ದು ನೇಕಾರ ಸಮಾಜದ ಸಂಘಟನೆಯಲ್ಲಿ ತೊಡಗಿಕೊಂಡು ಸಮಾಜದವರು ಶರಣ ತತ್ವದ ಆಧಾರದ ಮೇಲೆ ಬದುಕನ್ನು ರೂಪಿಸಿಕೊಳ್ಳುವಂತೆಪ್ರೇರಣೆ ನೀಡಿದರು. ಕರ್ತೃಗುರುಗಳ ಪುಣ್ಯಾರಾಧನೆಯನ್ನು ಮಾರ್ಗಶಿರ ಬಹುಳ ಅಷ್ಟಮಿಗೆನಡೆಸಿ 9 ದಿನಗಳ ಕಾಲ “ಶರಣ ಸಂಗಮ ಕಾರ್ಯಕ್ರಮ” ಆಯೋಜಿಸುತ್ತಾ ಬಂದಿದ್ದಾರೆ.ಶ್ರೀಮಠವು ಶೈಕ್ಷಣಿಕ ಸೇವೆಯಲ್ಲಿ ಸಹ ತೊಡಗಿಕೊಂಡಿದ್ದು ಶ್ರೀಮಠದವತಿಯಿಂದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕøತಿಕ ಸಂಘವನ್ನುಸ್ಥಾಪಿಸಲಾಗಿದೆ. ಸಂಘದ ವತಿಯಿಂದ ಅನೇಕ ವಿದ್ಯಾಸಂಸ್ಥೆಗಳು ಸ್ಥಾಪಿಸಲ್ಪಟ್ಟಿದ್ದು ಸಂಸ್ಕøತ,ವೇದ ಪಾಠಶಾಲೆಯನ್ನು ಆರಂಭಿಸಲಾಗಿದೆ. ಹಾಗೂ ಬುದ್ಧಿಮಾಂದ್ಯ ಮತ್ತು ಅಂಗವಿಕಲಮಕ್ಕಳ ಶಾಲೆ, ಅನಾಥಾಲಯ, ವೃದ್ಧಾಶ್ರಮ, ಹಾಗೂ ಉಚಿತ ಪ್ರಸಾದ ನಿಲಯಗಳನ್ನುಸ್ಥಾಪಿಸಿ ಬಡಜನರ ಆಶಾಕಿರಣವಾಗಿದೆ.ಶ್ರೀಗಳು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮಠವನ್ನುಉನ್ನತೀಕರಿಸುತ್ತಿದ್ದು ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಸೆಳೆದಿದ್ದಾರೆ. ಶ್ರೀಗಳುಶ್ರೀಮಠದಲ್ಲಿ ಕೌಟುಂಬಿಕ ಸಲಹಾ ಕೇಂದ್ರವನ್ನು ಸ್ಥಾಪಿಸಿದ್ದು ಅದರ ಮೂಲಕ ಸಮಸ್ಯೆಗಳನ್ನುಪರಿಹರಿಸುತ್ತಾರೆ ಹಾಗೆಯೇ ಗುಳೇದಗುಡ್ಡ ಪಟ್ಟಣ ಮತ್ತು ಬಾಗಲಕೋಟೆ ಜಿಲ್ಲೆಯಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಾ ಬಂದಿದ್ದಾರೆ.ಶ್ರೀಮಠದಲ್ಲಿ ಪ್ರತಿದಿನ ವಚನ ಪಠಣ, ಪ್ರವಚನಗಳಂತಹ ವಿನೂತನ ವಿಶಿಷ್ಟಕಾರ್ಯಕ್ರಮಗಳು ಜರುಗುತ್ತಿದ್ದು, ಶ್ರಾವಣಮಾಸದಲ್ಲಿ ನಿತ್ಯ ವಚನ ಅಭಿಷೇಕ ಹಾಗೂ ಸಂಜೆಪ್ರವಚನಗಳು ನಡೆಯುತ್ತಿವೆ. ಶಿವರಾತ್ರಿಗೆ ಜಾಗರಣೆ ನಡೆಸುತ್ತಾ ಬಂದಿದ್ದು ವಿಶೇಷಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತವೆ. ಮಾರ್ಗಶಿರ ಮಾಸದಲ್ಲಿ ಜರುಗುವ“ಶರಣ ಸಂಗಮ ಸಮಾರಂಭ”ವು ವಿಶಿಷ್ಟ ರೀತಿಯಲ್ಲಿ ಆಯೋಜನೆಗೊಳ್ಳುತ್ತಿದ್ದು ಮಾದಾರಚನ್ನಯ್ಯನ ಜಯಂತಿಯಿಂದ ಕಾರ್ಯಕ್ರಮಗಳು ಪ್ರಾರಂಭಗೊಂಡು 9 ದಿನಗಳ ಕಾಲವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಮೂಲಕಶ್ರೀಗಳು ಇತರ ಧಾರ್ಮಿಕ ಮುಖಂಡರಿಗೆ ಮಾದರಿ ಎನಿಸಿದ್ದಾರೆ.
Swamiji
Swamiji Name :
ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮಿಗಳು
Date of Birth :
12-9-1943
Place :
ಗುಳೇದಗುಡ್ಡ, ಬಾದಾಮಿ ತಾ||
Pattadikara :
19-6-1979
Photo :
Programs
ಪ್ರತಿ ದಿನ ಬೆಳಿಗ್ಗೆ ವಚನ ಪಠಣ, ಪ್ರವಚನೆ ಹಾಗೂ ಕರ್ತೃಗದ್ದುಗೆಗÉ ವಚನಾಭೀಷÉೀಕ.
ಶ್ರಾವಣ ಮಾಸದಲ್ಲಿ ನಿತ್ಯ ವಚನಾಭೀಷೇಕ, ವಿಶೇಷ ಪೂಜೆ, ಜಂಗಮ ದಾಸೋಹ, ಸಂಜೆ ಪ್ರವಚನ. ನವರಾತ್ರಿಯಲ್ಲಿ ನಿತ್ಯ ವಿಶೇಷ ಕಾರ್ಯಕ್ರಮಗಳು.
ಶಿವರಾತ್ರಿಗೆ ಜಾಗರಣೆ, ವಿಶೇಷ ಪೂಜೆ.
ಮಾರ್ಗಶಿರ ಬಹುಳ ಅಷ್ಟಮಿಗೆ ಶರಣ ಸಂಗಮ ಸಮಾರಂಭ, ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಹಾಗೂ 9 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು
(ಮಾದಾರ ಚೆನ್ನಯ್ಯ ಜಯಂತಿಯೊಂದಿಗೆ ಈ ಕಾರ್ಯಕ್ರಮ ಪ್ರಾರಂಭ).
Institutions
ಶ್ರೀ ಜಗದ್ಗುರು ಗುರುಸಿದ್ದೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕøತಿಕ ಸಂಸ್ಥೆ.
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ / ಪದವಿ ಕಾಲೇಜು.
ಸ್ಕೂಲ್ ಆಫ್ ನರ್ಸಿಂಗ್ / ಅಂಗನವಾಡಿ ತರಬೇತಿ ವಿದ್ಯಾಲಯ.
ಮಹಿಳಾ ಬಿ.ಎಡ್. ಕಾಲೇಜು/ ಡಿ.ಎಡ್. ಕಾಲೇಜು.
ಬುದ್ಧಿ ಮಾಂದ್ಯ ಹಾಗೂ ಅಂಗವಿಕಲ ಮಕ್ಕಳ ಶಾಲೆ.
ಸಂಸ್ಕøತ-ವೇದ ಪಾಠಶಾಲೆ. ವಿದ್ಯಾರ್ಥಿ ನಿಲಯ / ಅನಾಥಾಲಯ / ವೃದ್ಧಾಶ್ರಮ.