ಕರ್ತೃ – ಶ್ರೀ ಷ.ಬ್ರ. ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಐತಿಹಾಸಿಕ ಗುಳೇಗುಡ್ಡದ ಹೊರಬಾಗದಲ್ಲಿ ಶ್ರೀ ಅಮರೇಶ್ವರ ಶಿವಾಚಾರ್ಯಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಅಮರೇಶ್ವರ ಬೃಹನ್ಮಠಕ್ಕೆ ಶತಮಾನಗಳಇತಿಹಾಸವಿದ್ದು ತನ್ನ ಧಾರ್ಮಿಕ ಆಚರಣೆಗಳಿಂದ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದ್ದು ಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿದೆ.ಶ್ರೀ ಅಮರೇಶ್ವರ ಶಿವಾಚಾರ್ಯರು ಲೋಕಸಂಚಾರಿಗಳಾಗಿದ್ದು ಗುಳೇದಗುಡ್ಡಕ್ಕೆಬಂದು ಅಮರೇಶ್ವರ ದೇವಸ್ಥಾನದ ಸಮೀಪದ ಹೊಂಡದ ಬಳಿ ಅನುಷ್ಠಾನಗೊಂಡಿದ್ದರು.ಆ ಸಮಯದಲ್ಲಿ ಶ್ರೀಗಳಿಂದ ಒಳಿತನ್ನು ಕಂಡ ಭಕ್ತರು ಶ್ರೀಗಳಿಗೆ ಶ್ರೀಮಠವನ್ನು ಸ್ಥಾಪಿಸಿಕೊಟ್ಟಿದ್ದಾರೆ. ನಂತರದ ದಿನಗಳಲ್ಲಿ ಶ್ರೀಗಳು ಧಾರ್ಮಿಕ ಆಚರಣೆಗಳೊಂದಿಗೆ ಭಕ್ತರಿಗೆ ಸನ್ಮಾರ್ಗತೋರಿ ಉದ್ಧರಿಸಿದ್ದಾರೆ. ಇವರ ನಂತರ ಈಗಿನ ಕಾಶೀ ಜಗದ್ಗುರುಗಳಾದ ಶ್ರೀ ಚಂದ್ರಶೇಖರಶಿವಾಚಾರ್ಯ ಸ್ವಾಮಿಗಳು 1977ರಲ್ಲಿ ಶ್ರೀ ಮಠದ ಅಧಿಕಾರ ವಹಿಸಿಕೊಂಡು ತದನಂತರಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ಕಾಶಿ ಜಗದ್ಗುರುಗಳಾಗಿ ಅಧಿಕಾರ ವಹಿಸಿಕೊಂಡರು.ಹಿಂದಿನ ಗುರುಗಳಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಹಾನ್ವಿದ್ವತ್ ಪಂಡಿತರು. ಇವರು ಕರ್ನಾಟಕದ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ತಮ್ಮ “ಜಾನಕಿಹರಣಂ” ಎಂಬ ಮಹಾಕಾವ್ಯದ ಮೇಲೆ ಪಡೆದವರು. ನಂತರ ಕಾಶಿಗೆತೆರಳಿ ವೇದಾಂತಾಚಾರ್ಯ ಪದವಿಯನ್ನು ಪಡೆದು ಶ್ರೀ ಅಮರೇಶ್ವರ ಮಠದಅಧಿಕಾರವನ್ನು ವಹಿಸಿಕೊಂಡರು. ಶ್ರೀಗಳು ಮಠವನ್ನು ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಮುನ್ನಡೆಸಿದ್ದು ಇದರೊಂದಿಗೆ ತುಮಕೂರಿನ ಹಿರೇಮಠದಅಧಿಕಾರವನ್ನೂ ವಹಿಸಿಕೊಂಡು ಉಭಯ ಮಠಗಳನ್ನು ಮುನ್ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಮೇ 6,2011ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಧಾರ್ಮಿಕ ಆಚರಣೆಗಳೊಂದಿಗೆ ಸಾಮಾಜಿಕವಾಗಿಯೂ ಕಾರ್ಯನಿರ್ವಹಿಸುತ್ತಾ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆಹಾಗೂ ಶ್ರೀಮಠದ ಶಾಖಾಮಠಗಳಾದ ತೋಗುಣಸಿ, ಇಲಕಲ್ಲ, ಲಾಯದ ಗುಂಧಿ ಹಾಗೂಅಮರಾವತಿ ಮಠಗಳನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ನೀಲಕಂಠ ಶಿವಾಚಾರ್ಯ
Date of Birth :
31-7-1987
Place :
ತೋಗುಣಸಿ, ಬಾದಾಮಿ ತಾ||
Pattadikara :
6-5-2011
Photo :
Programs
ಶಿವರಾತ್ರಿಯಂದು ಶ್ರೀಮಠದ ಜಾತ್ರೆ.
ವೈಶಾಖ ಬಹುಳ ತ್ರಯೋದಶಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಅನ್ನಸಂತರ್ಪಣೆ.
ಕಾರ್ತೀಕ ಮಾಸದಲ್ಲಿ ದೀಪೋತ್ಸವ.