ತೇರದಾಳ ಗ್ರಾಮವು ಪುರಾತನ ಕಾಲದಿಂದಲೂ ವೀರಶೈವ ಧರ್ಮಾಚರಣೆಗಳನ್ನು ಆಚರಿಸುತ್ತಾ ಬಂದಿದ್ದು, ಈ ಗ್ರಾಮದ ವಿರಕ್ತಮಠ ಗಲ್ಲಿಯಲ್ಲಿ ಸುಮಾರು 16ನೇಶತಮಾನದಲ್ಲಿ ಶ್ರೀ ಮುಪ್ಪಿನೇಂದ್ರ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ವಿರಕ್ತಮಠವುತನ್ನ ಧಾರ್ಮಿಕ ಆಚರಣೆ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.ಸದಾ ಸಂಚಾರದಲ್ಲಿರುತ್ತಿದ್ದ ಶ್ರೀ ಮುಪ್ಪಿನೇಂದ್ರ ಸ್ವಾಮಿಗಳು ಮಹಾನ್ ತಪೋನಿಷ್ಠರಾಗಿದ್ದು ತೇರದಾಳ ಗ್ರಾಮಕ್ಕೆ ಬಂದು ನೆಲೆಸಿ ಗ್ರಾಮದ ಹೊರಭಾಗದ ನಿರ್ಜನ ಪ್ರದೇಶದಲ್ಲಿತಪಸ್ಸಾನ್ನಾಚರಿಸುತ್ತಾ ಇರುತ್ತಾರೆ. ಶ್ರೀಗಳ ತಪೋಶಕ್ತಿಯಿಂದ ಪ್ರಭಾವಿತರಾದ ಭಕ್ತರು ಶ್ರೀಗಳದರ್ಶನಕ್ಕೆ ಆಗಮಿಸುತ್ತಾ ಅವರ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಶ್ರೀಗಳ ಪ್ರಭಾವದಅರಿವಾದ ಆದಿಲ್ಶಾಹಿಯು ಇವರನ್ನು ಬೇಟಿ ಮಾಡಿ ಆಶೀರ್ವಾದ ಪಡೆದು ಇವರಿಗೆ ಮಠಕಟ್ಟಿಸಿ ಕೊಡುತ್ತಾರೆ ಎಂದು ಹೇಳಲಾಗಿದೆ.ಕರ್ತೃಗುರುಗಳ ನಂತರದಲ್ಲಿ 5 ಜನ ಸ್ವಾಮಿಗಳು ಅಧಿಕಾರ ನಡೆಸಿರಬಹುದು.ಕಾರಣ ಕರ್ತೃಗುರುಗಳ ಸಮಾದಿಯೂ ಸೇರಿದಂತೆ ಶ್ರೀಮಠದಲ್ಲಿ 6 ಸಮಾಧಿಗಳಿದ್ದು, ದಿನನಿತ್ಯ ಪೂಜೆಗೆ ಒಳಪಟ್ಟಿವೆ. ಕರ್ತೃಗುರಗುಳ ನಂತರದ ಪರಂಪರೆಯಲ್ಲಿ ಬರುವ ಶ್ರೀಶಿವಲಿಂಗ ಸ್ವಾಮಿಗಳು ಅಥಣಿ ಶಿವಯೋಗಿಗಳ ಸಮಕಾಲೀನರಾಗಿದ್ದು, ಪ್ರಭಾವಿಗುರುಗಳಾಗಿ ಬೆಳೆದು ಶ್ರೀ ಮಠವನ್ನು ಅಭಿವೃದ್ಧಿ ಪಡಿಸಿದರೆಂದು ತಿಳಿದುಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳು 1987ರಲ್ಲಿ ಶ್ರೀಮಠದಅಧಿಕಾರ ಪಡೆದು ಮಠವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಶ್ರೀಗಳು ಅಥಣಿ ಗಚ್ಚಿನಮಠ, ಧಾರವಾಡದ ಮುರುಘಾಮಠದಲ್ಲಿ ವಿದ್ಯಾಭ್ಯಾಸವನ್ನು ಮಾಡಿದವರು. ಶ್ರೀಗಳುಮಠದ ಅಧಿಕಾರ ಸ್ವೀಕರಿಸಿದಾಗ ಶ್ರೀಮಠವು ಜೀರ್ಣಾವಸ್ಥೆಯಲ್ಲಿದ್ದು ಶ್ರೀಗಳು ಶ್ರೀಮಠವನ್ನುಕಾನೂನುಬದ್ಧವಾಗಿ ಹಾಗೂ ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಪಾದ ಸ್ವಾಮಿಗಳು 2002ರ ಅಕ್ಟೋಬರ್2ರಲ್ಲಿ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದು ಹೆಚ್ಚು ಕ್ರಿಯಾಶೀಲರಾಗಿ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಗಳಲ್ಲಿ ನಿರತರಾಗಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಪಾದ ಸ್ವಾಮಿಗಳು
Date of Birth :
6-3-1992
Place :
ತೇರದಾಳ, ಜಮಖಂಡಿ ತಾ||
Pattadikara :
2-10-2002
Photo :
Programs
ಪ್ರತಿ ಸೋಮವಾರ ಶಿವಾನುಭವ ಗೋಷ್ಠಿ.
ಯುಗಾದಿಯಂದು ಕರ್ತೃ ಶ್ರೀ ಮ.ನಿ.ಪ್ರ. ಮುಪ್ಪಿನೇಂದ್ರ
ಶಿವಯೋಗಿಗಳ ಪುಣ್ಯಸ್ಮರಣೋತ್ಸವ.
ದಸರಾ ನವಮಿ ತಿಥಿಗೆ ಲಿಂ. ಶ್ರೀ ಮ.ನಿ.ಪ್ರ. ಶಿವಲಿಂಗೇಶ್ವರ
ಸ್ವಾಮಿಗಳ ಪುಣ್ಯಸ್ಮರಣೋತ್ಸವ.
ಶಿವರಾತ್ರಿಗೆ ಶಿವಯೋಗ ದಿನಾಚರಣೆ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ.