ಕರ್ತೃ – ಶ್ರೀ ಮ.ನಿ.ಪ್ರ. ಮಡಿವಾಳೇಶ್ವರ ಸ್ವಾಮಿಗಳು(ಗಡ್ಡದಪ್ಪನವರು)
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮರೇಗುದ್ದಿ ಗ್ರಾಮವು ತಾಲ್ಲೂಕುಕೇಂದ್ರದಿಂದ 12 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಶ್ರೀಮಡಿವಾಳೇಶ ್ವರ ಮಹಾಸ್ವಾಮಿಗಳಿಂದ 19ನೇ ಶತಮಾನದ ಆರಂಭದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಅಡವಿ ಸಿದ್ದೇಶ್ವರ ಮಠವು ಅಸ್ತಿತ್ವದಲ್ಲಿದ್ದು, ತನ್ನ ಧಾರ್ಮಿಕ ಚಿಂತನಕಾರ್ಯಕ್ರಮಗಳಿಂದ ಜಿಲ್ಲೆಯ ಪ್ರಮುಖ ಮಠಗಳಲ್ಲಿ ಒಂದಾಗಿದೆ.ಬೆಳಗಾಂ ಜಿಲ್ಲೆ ಗೋಕಾಕ್ ತಾಲ್ಲೂಕಿನ ಅಂಕಲಗಿಯ ಅಡವಿ ಸಿದ್ದೇಶ್ವರ ಮಠದಹಿನ್ನೆಲೆಯು ಶೂನ್ಯ ಪೀಠದ ಕೊಂಬೆಯಿಂದ ಚಿಗುರಿದ್ದೆಂಬುದು ಐತಿಹಾಸಿಕ ಸತ್ಯ.
ಅಂಕಲಗಿಯ ಅಡವಿಸಿದ್ದೇಶ್ವರ ಮಠದ ಸಂಪ್ರದಾಯದಲ್ಲಿಯೇ ಶ್ರೀ ಮಡಿವಾಳೇಶ್ವರಸ್ವಾಮಿಗಳು ಮರೇಗುದ್ದಿಯ ಅಡವಿ ಸಿದ್ದೇಶ್ವರ ಮಠವನ್ನು ಸ್ಥಾಪಿಸಿದ್ದರು. ಇವರ ಕಾಲಸುಮಾರು 1790 ರಿಂದ 1890 ಆಗಿದ್ದಿರಬಹುದು.ಅಂಕಲಗಿಯ ಶ್ರೀ ಅಡವಿ ಸಿದ್ದೇಶ್ವರರು ಮಹಾ ಶಿವಶರಣರು ಅವರ ಸೇವೆಮಾಡುತ್ತಾ ಅವರ ಶಿಷ್ಯರಾಗಿದ್ದ ಶ್ರೀ ಮಡಿವಾಳೇಶ್ವರರು ಗುರುಗಳ ಅಪ್ಪಣೆಯೊಂದಿಗೆಗುರುಗಳ ಆಜ್ಞೆಯಂತೆ ಮರೇಗುದ್ದಿಗೆ ಬಂದು ಶ್ರೀಮಠವನ್ನು ಸ್ಥಾಪಿಸಿದ್ದಾರೆ. ಶ್ರೀಗಳುಶ್ರೀಮಠದಲ್ಲಿ ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನು ಶ್ರೀಮಠಕ್ಕೆ ಸೆಳೆದು ಅವರಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದಾರೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ 3 ಜನ ಶ್ರೀಗಳು ಬಂದು ಹೋಗಿಈಗ 5ನೇ ಮತ್ತು 6ನೇ ಶ್ರೀಗಳು ಅಧಿಕಾರ ನಡೆಸುತ್ತಿದ್ದಾರೆ. ಕರ್ತೃಗುರಗುಳ ನಂತರ ಶ್ರೀಪರಯ್ಯ ಸ್ವಾಮಿಗಳು ಮತ್ತು ಶ್ರೀ ರಾಚಯ್ಯ ಸ್ವಾಮಿಗಳು ಶ್ರೀಮಠದ ಅಧಿಕಾರವನ್ನು ನಡೆಸಿದ್ದುಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಶ್ರೀಮಠವನ್ನು ಮುನ್ನಡೆಸಿದ್ದಾರೆ.4ನೇ ಶ್ರೀಗಳಾದ ಶ್ರೀ ಗುರುಪಾದೇಶ್ವರ ಸ್ವಾಮಿಗಳು.
ಶ್ರೀಮಠದ ಅಧಿಕಾರವನ್ನುವಹಿಸಿಕೊಂಡು ಧಾರ್ಮಿಖ ಆಚರಣೆಗಳೊಂದಿಗೆ ಶ್ರೀಮಠವನ್ನು ಅಭಿವೃದ್ಧಿ ಪಡಿಸಿ ಹೆಚ್ಚಿನಸಂಖ್ಯೆಯ ಭಕ್ತರನ್ನು ಶ್ರೀ ಮಠದತ್ತ ಸೆಳೆದಿದೆ. ಶ್ರೀಗಳ ಕಾಲದಲ್ಲಿ ಶ್ರೀ ಮಠವುಸಾಮಾಜಿಕವಾಗಿ ಹಾಗೂ ಸಾಂಸ್ಕøತಿಕವಾಗಿ ತನ್ನದೇ ಆದ ಪ್ರಸಿದ್ದಿಯನ್ನು ಪಡೆದು ಹೆಚ್ಚುಪ್ರಚಲಿತಕ್ಕೆ ಬಂದಿದೆ. ಇಂತಹ ಮಹಾನ್ ಶಿವಯೋಗಿಗಳು 1974ರಲ್ಲಿ ಲಿಂಗೈಕ್ಯರಾದರು.ಶ್ರೀ ಗುರುಪಾದೇಶ್ವರ ಸ್ವಾಮಿಗಳ ನಂತರ ಅಧಿಕಾರಕ್ಕೆ ಬಂದ ಈಗಿನ ಹಿರಿಯಗುರುಗಳಾದ ಶ್ರೀ ನಿರುಪಾದೀ ಸ್ವಾಮಿಗಳು 1965ರಲ್ಲಿ ಹಿಂದಿನ ಗುರುಗಳ ಕಾಲದಲ್ಲೇಪಟ್ಟಾಧಿಕಾರದ ಅನುಗ್ರಹ ಪಡೆದವರು. ಶ್ರೀಗಳು ಕಾಶಿಯಲ್ಲಿ ಸಂಸ್ಕøತ ಅಧ್ಯಯನ ಮಾಡಿಅಲ್ಲಿಂದ ಮರಳಿ ಬಂದು 1965ರ ಡಿಸೆಂಬರ್ 17ರಲ್ಲಿ ಶ್ರೀ ಗುರುಪಾದೇಶ್ವರ ಸ್ವಾಮಿಗಳಆಶ್ರಯದಂತೆ ಪಟ್ಟಾದಿಕಾರ ಸ್ವೀಕರಿಸಿ ಶ್ರೀ ನಿರುಪಾದಿಸ್ವಾಮಿಗಳೆನಿಸಿದರು.ಶ್ರೀಗಳು ಮತ್ತೆ ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಶಾಂತಾಶ್ರಯದಲ್ಲಿಕೈವಲ್ಯ ಪದ್ಧತಿ, ವಿವೇಕ ಚಿಂತಾಮಣಿ, ಗೀತೆ, ವೇದೋಪನಿಷತ್ಗಳನ್ನು ಅಧ್ಯಯನ ಮಾಡಿ.ನಿಜಗುಣ ಶಿವಯೋಗಿಗಳ ಸಾಹಿತ್ಯವನ್ನು ಅಭ್ಯಸಿಸಿದರು. ನಂತರದಲ್ಲಿ “ಹಿಂದಿ ರತ್ನ”ಪರೀಕ್ಷೆಯಲಲಿ ಉನ್ನತ ಶ್ರೇಣಿಗಳಿಸಿ ಸ್ವರ್ಣ ಪದಕವನ್ನು ಪಡೆದರು. ಹೀಗೆ ಪಾಂಡಿತ್ಯವನ್ನುಗಳಿಸಿದ ಶ್ರೀ ನಿರೂಪಾದಿಸ್ವಾಮಿಗಳು ಮುಂದೆ ತಾವೇ ಹತ್ತಾರು ಕೃತಿಗಳನ್ನು ರಚಿಸಿದರು.
ಶ್ರೀ ನಿರುಪಾದ ಸ್ವಾಮಿಗಳು ಹೆಚ್ಚು ಕ್ರಿಯಾಶೀಲರಾಗಿ ಶ್ರೀಮಠವನ್ನು ಸಂರ್ಥವಾಗಿಮುನ್ನಡೆಸುತ್ತಾ ಬಂದಿದ್ದಾರೆ. ತಮ್ಮ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಾಧನೆಗಳಿಂದ ಭಕ್ತರಪ್ರೀತಿಗೆ ಪಾತ್ರರಾಗಿದ್ದಾರೆ. ಹಾಗೆಯೇ ಸಾಹಿತ್ಯಿಕವಾಗಿಯೂ ಸಮಾಜಕ್ಕೆ ತಮ್ಮದೇ ಆದಕೊಡುಗೆಯನ್ನು ನೀಡಿದ್ದಾರೆ. ಹೀಗಿರುವಾಗಲೇ ಶ್ರೀಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀಗುರುಪಾದ ಸ್ವಾಮಿಗಳನ್ನು ನೇಮಕ ಮಾಡಿಕೊಂಡು 2001ರ ನವೆಂಬರ್ 26ರಲ್ಲಿಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ.ಉಭಯ ಶ್ರೀಗಳೂ ಶ್ರೀಮಠವನ್ನು ಮುನ್ನಡೆಸುತ್ತಾ, ಬಂದಿದ್ದು ಶ್ರೀ ಮಠದಲ್ಲಿದಿನನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ, ಷಷ್ಠ ಶುದ್ದ ದಶಮಿಗೆ ಶ್ರೀ ಅಡವಿ ಸಿದ್ದೇಶ್ವರರರಥೋತ್ಸವದ ಆಯೋಜನೆ ಮಾಡಲಾಗುತ್ತಿದೆ. ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳುನಡೆಯುತ್ತಿವೆ. ಹಾಗೆಯೇ ಶ್ರಿ ಸಿದ್ದೇಶ್ವರ ವಿದ್ಯಾಪೀಠ ಟ್ರಸ್ಟ್ (ರಿ.) ದಿಂದ ವಿದ್ಯಾಸಂಸ್ಥೆಗಳನ್ನುನಡೆಸುತ್ತಾ ಈ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸ್ಕಕೆ ದಾರಿ ತೋರುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ. ನಿರುಪಾದಿ ಸ್ವಾಮಿಗಳು
Date of Birth :
25-5-1942
Place :
ಮರೇಗುದ್ದಿ, ಜಮಖಂಡಿ ತಾ||
Pattadikara :
17-12-1965
Photo :
Swamiji Name :
ಶ್ರೀ ನಿ.ಪ್ರ. ಗುರುಪಾದ ಸ್ವಾಮಿಗಳು
Date of Birth :
15-7-1976
Pattadikara :
26-11-2001
Photo :
Programs
ಶಿವರಾತ್ರಿಗೆ ಶಿವಾನುಭವ ಲಿಂಗಪೂಜೆ, ಜಂಗಮ ಪ್ರಸಾದ.
ವಿಜಯ ದಶಮಿಗೆ ಬನ್ನಿ ಮುಡಿಯುವ ಕಾರ್ಯಕ್ರಮ.
ಶ್ರಾವಣ ಉತ್ಸವ - ಪುರಾಣ ಪ್ರವಚನ, ಭಜನೆ.
ಯುಗಾದಿ ಪಾಡ್ಯದಲ್ಲಿ ಬೀಜ ಹಂಚುವ ಕಾರ್ಯಕ್ರಮ.
ಪುಷ್ಯ ಶುದ್ಧ ನವಮಿಗೆ (ಜಟಾಭಿಷೇಕ) ಶ್ರೀ ಗುರುಪಾದೇಶ್ವರ ಸ್ವಾಮಿಗಳ ಪುಣ್ಯಾರಾಧನೆ.
ಪುಷ್ಯ ಶುದ್ಧ ದಶಮಿಗೆ ಶ್ರೀ ಅಡವಿ ಸಿದ್ದೇಶ್ವರ ರಥೋತ್ಸವ, ಪ್ರಸಾದ