Shree Kalyana Horagina Matha

Shree Kalyana Horagina Matha

ಶ್ರೀ ಕಲ್ಯಾಣ ಹೊರಗಿನ ಮಠ

Average Reviews

Description

ಶ್ರೀ ಕಲ್ಯಾಣ ಹೊರಗಿನ ಮಠ

ಕರ್ತೃ – ಪೂಜ್ಯ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮಿಗಳು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಒಂದು ಶಿವಶರಣರ ಬೀಡು ಇಲ್ಲಿಎಲ್ಲಿ ನೋಡಿದರೂ ಪುರಾತನ ಪರಂಪರೆಯ ಮಠಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳುಕಾಣಸಿಗುತ್ತವೆ. ಅಂತಹ ಒಂದು ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಕಲ್ಯಾಣ ಹೊರಗಿನಮಠವು ಕೊಣ್ಣೂರು ಗ್ರಾಮದ ಹೊರವಲಯದಲ್ಲಿ ಗ್ರಾಮದಿಂದ ಸುಮಾರು ಒಂದು ಕಿ.ಮೀ.ಅಂತರದಲ್ಲಿ ಸ್ಥಾಪಿತಗೊಂಡಿದ್ದು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ.ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದು ಬಂದಿರುವ ಶ್ರೀ ಕಲ್ಯಾಣ ಹೊರಗಿನ ಮಠದ ಕರ್ತೃ ಗುರುಗಳು ಶ್ರೀ ಷ.ಬ್ರ. ಗುರುಕರಿಬಸವೇಶ್ವರ ಶಿವಾಚಾರ್ಯ ಸ್ವಾಮಿಗಳೆಂದು ಹೇಳಲಾಗಿದೆ.

ಶ್ರೀಮಠವು ಪುರಾತನ ಕಾಲದಮಠವಾದರೂ ಪರಂಪರೆಯ ಬಗ್ಗೆ ಆಧಾರಗಳನ್ನು ದಾಖಲಿಸದೇ ಇರುವುದರಿಂದಪರಂಪರೆಯು ಅಸ್ಪಷ್ಟವಾಗಿದ್ದು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ.ಶ್ರೀ ಕರಿಬಸವ ಶಿವಾಚಾರ್ಯರು ಧರ್ಮನಿಷ್ಠರೂ ಅನುಷ್ಠಾನ ಪ್ರಿಯರೂ ಆಗಿದ್ದುತಮ್ಮ ಅನುಷ್ಠಾನ ಬಲದಿಂದ ಭಕ್ತರಿಗೆ ಸನ್ಮಾರ್ಗ ತೋರುತ್ತಾ ಅವರ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪಿಸಿದ್ದಾರೆ ಎಂದು ತಿಳಿದು ಬರುತ್ತದೆ. ಶ್ರೀಗಳ ನಂತರದ ಪರಂಪರೆಯಬಗ್ಗೆ ಸ್ಪಷ್ಟತೆಯಿಲ್ಲವಾದರೂ ಸುಮಾರು ಏಳು ಜನ ಶ್ರೀಗಳು ಅಧಿಕಾರ ವಹಿಸಿಕೊಂಡುಮುನ್ನಡೆಸಿರಬಹುದೆಂದು ಅಂದಾಜಿಸಲಾಗಿದೆ.

ಹಿಂದಿನ ಗುರುಗಳಾದ ಶ್ರೀ ಗುರುಪಾದಸ್ವಾಮಿಗಳು 1955ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕ ಆಚರಣೆಗಳೊಂದಿಗೆಮಠವನ್ನು ಅಭಿವೃದ್ಧಿ ಪಡಿಸಿದ್ದು ಕಾರಣಾಂತರಗಳಿಂದ ಶ್ರೀಮಠವನ್ನು ತ್ಯಜಿಸಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಪ್ರಭು ದೇವರು ಬಹುದಿನಗಳಿಂದ ಖಾಲಿಉಳಿದಿದ್ದ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದು ಹೊನ್ನಾಳಿಯಹಿರೇಕಲ್ಮಠದಲ್ಲಿ ವಿದ್ಯಾಭ್ಯಾಸ ಮಾಡಿ ತದನಂತರ ಮೈಸೂರಿನ ಜಪದಕಟ್ಟೆ ಮಠದಲ್ಲಿ ಆಶ್ರಯಪಡೆದು ಸಂಸ್ಕøತ ಮತ್ತು ಆಗಮಗಳನ್ನು ಅಭ್ಯಸಿಸಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣದಲ್ಲಿ ಪುರಾಣಪ್ರವಚನ, ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಶಿವರಾತ್ರಿಯಲ್ಲಿ ಶಿವಸಪ್ತಾಹಕಾರ್ಯಕ್ರಮದೊಂದಿಗೆ ಹಿರಿಯ ಗುರುಗಳ ಪುಣ್ಯಾರಾಧನೆಯನ್ನು ನಡೆಸಲಾಗುತ್ತದೆ.

Swamiji

Swamiji Name :
ಪೂಜ್ಯ ಶ್ರೀ ಪ್ರಭು ದೇವರು
Date of Birth :
6-12-1983
Place :
ಕೊಣ್ಣೂರು, ಜಮಖಂಡಿ ತಾ||
Photo :

Programs

ಶಿವರಾತ್ರಿಗೆ ಶಿವ ಸಪ್ತಾಹ ಕಾರ್ಯಕ್ರಮ, ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ಭಜನೆ ಹಾಗೂ ವಿವಿಧ ಕಾರ್ಯಕ್ರಮಗಳು.
ಶ್ರಾವಣದಲ್ಲಿ ಪುರಾಣ ಪ್ರವಚನ ಹಾಗೂ ವಿಶೇಷ ಪೂಜೆ

Photos

Full Address Kannada

ಶ್ರೀ ಕಲ್ಯಾಣ ಹೊರಗಿನ ಮಠ,
ಕೊಣ್ಣೂರು - 587 301
ಜಮಖಂಡಿ ತಾ||, ಬಾಗಲಕೋಟೆ ಜಿ||

Map

Near by Places

ಕೊಣ್ಣೂರು - 1 ಕಿ.ಮೀ.
ಸಿದ್ದಾಪುರ ಕ್ರಾಸ್ - 110 ಕಿ.ಮೀ.
ಜಮಖಂಡಿ - 15 ಕಿ.ಮೀ.
ಬಾಗಲಕೋಟೆ - 65 ಕಿ.ಮೀ.

Statistic

20 Views
0 Rating
0 Favorite
0 Share
error: Content is protected !!