ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಜಗದಾಳ ಗ್ರಾಮವು ತಾಲ್ಲೂಕುಕೇಂದ್ರದಿಂದ 25 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಜಡೇಶ್ವರಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಜಡೇ ಗುರುಸ್ಥಲ ಮಠವು ಅಸ್ತಿತ್ವದಲ್ಲಿದ್ದುಶರಣ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠವು ತನ್ನ ಧಾರ್ಮಿಕ ಕಾರ್ಯಕ್ರಮಗಳನ್ನುನಡೆಸಿಕೊಂಡು ಬರುತ್ತಿದೆ.
ಕರ್ತೃಗುರುಗಳಾದ ಪೂಜ್ಯ ಶ್ರೀ ಜಡೇಶ್ವರ ಮಹಾಸ್ವಾಮಿಗಳು ಮಹಾನ್ಶಿವಶರಣರು ಇವರು ಎಲ್ಲದರಲ್ಲೂ ಹಾಗೂ ಎಲ್ಲರಲ್ಲೂ ದೇವರನ್ನು ಕಾಣುತ್ತಿದ್ದಮಹಾಪುರುಷರು. ಶ್ರೀಗಳು ತಮ್ಮ ಧಾರ್ಮಿಕ ಆಚರಣೆಗಳಿಂದ ಹಾಗೂ ಧ್ಯಾತ್ಮಿಕತೆಯಪ್ರಭಾವದಿಂದಾಗಿ ಈ ಭಾಗದ ಜನರನ್ನು ಭಕ್ತಿ ಮಾರ್ಗದಲ್ಲಿ ಮುನ್ನಡೆಯಲುಪ್ರೇರೇಪಿಸುತ್ತಿದ್ದರು. ಹಾಗೂ ಭಕ್ತರ ಸಹಕಾರದೊಂದಿಗೆ ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳನ್ನು ನಡೆಸುತ್ತಾ ಅಭಿವೃದ್ಧಿಗೊಳಿಸಿದ್ದಾರೆ.
ಕರ್ತೃಗುರುಗಳ ಕಾಲ ಯಾವುದು ಹಾಗೂ ಅವರ ಮುಂದಿನ ಪರಂಪರೆಯ ಬಗ್ಗೆಯಾವುದೇ ಮಾಹಿತಿಗಳು ಲಭ್ಯವಿಲ್ಲ. ಈಗಿನ ಶ್ರೀಗಳಾದ ಪೂಜ್ಯ ಶ್ರೀ ಜಡೇಶ್ವರ ಸ್ವಾಮಿಗಳುಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದು ಶ್ರೀ ಮಠದ ಅಧಿಕಾರವನ್ನು ವಹಿಸಿಕೊಂಡುಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಸಂಸಾರಿಗಳಾದ ಶರಣರಾಗಿದ್ದುಕೊಂಡು ತಮ್ಮಧಾರ್ಮಿಕತೆಗೆ ಯಾವುದೇ ಚ್ಯುತ ಬರದಂತೆ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಪ್ರತಿಅಮವಾಸ್ಯೆಗೆ ವಿಶೇಷ ಪೂಜೆ, ಹುಣ್ಣಿಮೆಗಳಲ್ಲಿ ಸತ್ಯಂಶ ಹಾಗೂ ಮಾಘ ಮಾಸದಲ್ಲಿ ಶ್ರೀಜಡೇಶ್ವರ ರಥೋತ್ಸವ ಜರುಗುತ್ತದೆ.
Swamiji
Swamiji Name :
ಪೂಜ್ಯ ಶ್ರೀ ಜಡೇಶ್ವರ ಸ್ವಾಮಿಗಳು
Date of Birth :
1954
Place :
ಜಗದಾಳ, ಜಮಖಂಡಿ ತಾ||
Photo :
Programs
ಪ್ರತಿ ಹುಣ್ಣಿಮೆಗೆ ಸತ್ಸಂಗ. ಮಾಘ ಮಾಸದಲ್ಲಿ ಶ್ರೀ ಜಡೇಶ್ವರ ರಥೋತ್ಸವ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.