Shree Yogashrama

Shree Yogashrama

ಶ್ರೀ ಯೋಗಾಶ್ರಮ

Average Reviews

Description

ಶ್ರೀ ಯೋಗಾಶ್ರಮ, ಹುಲಿಯಾಳ

ಕರ್ತೃ – ಶ್ರೀ ಷ.ಬ್ರ. ಸದ್ಗುರು ಶಂಭುಲಿಂಗ ಶಿವಾಚಾರ್ಯರು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹುಲಿಯಾಳ ಗ್ರಾಮವು ತಾಲ್ಲೂಕುಕೇಂದ್ರದಿಂದ ಕೇವಲ 6 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ 1939 ರಲ್ಲಿಶ್ರೀ.ಷ.ಬ್ರ. ಸದ್ಗುರು ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವಶ್ರೀ ಯೋಗಾಶ್ರಮವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಬಹುಬೇಗನೇ ಪ್ರಚಲಿತಕ್ಕೆಬಂದಿದೆ.

ಶ್ರೀ ರಂಭಾಪುರಿ ಪೀಠದ ಶಾಖಾಮಠವಾದ ಶ್ರೀ ಯೋಗಾಶ್ರಮದಕರ್ತೃಗುರುಗಳು ಶ್ರೀ ಶಂಭುಲಿಂಗ ಶಿವಾಚಾರ್ಯರು. ಶ್ರೀಗಳು ಹುಲಿಯಾಳು ಗ್ರಾಮದಹೊರವಲಯದ ಬೆಟ್ಟದಲ್ಲಿ ಅನುಷ್ಟಾನಗೊಂಡು ಶ್ರೀಮಠವನ್ನು ಸ್ಥಾಪಿಸಿದ್ದಾರೆ.

ಶ್ರೀಗಳುಧರ್ಮನಿಷ್ಟರಾಗಿದ್ದು ತಮ್ಮ ಅನುಷ್ಟಾನ ಬಲದಿಂದ ಶ್ರೀಮಠಕ್ಕೆ ಭಕ್ತರ ಸಹಕಾರ ಪಡೆದುಮುನ್ನಡೆಸಿದ್ದಾರೆ.

ಈಗಿನ ಹಿರಿಯ ಗುರುಗಳಾದ ಶ್ರೀ ವಿದ್ಯಾನಂದ ಶಿವಾಚಾರ್ಯಮಹಾಸ್ವಾಮಿಗಳವರು ಕರ್ತೃಗುರುಗಳ ನಂತರ 1958ರ ಮೇ 3ರಲ್ಲಿ ಶ್ರೀಮಠದ ಅಧಿಕಾರವಹಿಸಿಕೊಂಡು ಧಾರ್ಮಿಕ ಆಚರಣೆಗಳೊಂದಿಗೆ ಶ್ರೀಮಠವನ್ನು ಮುನ್ನಡೆಸಿಕೊಂಡುಬಂದಿದ್ದಾರೆ.

ಶ್ರೀಗಳು ಶ್ರೀಮಠದಲ್ಲಿ ಆಚಾರ್ಯ ಹಾಗೂ ಶರಣರ ತತ್ವಗಳನ್ನು ಪ್ರಚಾರಮಾಡುತ್ತಾ ವೀರಶೈವ ಧರ್ಮದ ಬೆಳವಣಿಗೆಗೆ ಕಾರಣರಾಗಿದ್ದಾರೆ.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದಾರೆ. ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳನ್ನು ನಡೆಸುತ್ತಾ ಭಕ್ತರನ್ನು ಶ್ರೀಮಠಕ್ಕೆ ಸೆಳೆದಿದ್ದಾರೆ. ಶ್ರೀಗಳು 2013ರ ಡಿಸೆಂಬರ್12ರಲ್ಲಿ ಶ್ರೀ.ಷ.ಬ್ರ. ರೇಣುಕ ಸದಾಶಿವ ಶಿವಾಚಾರ್ಯ ಸ್ವಾಮಿಗಳನ್ನುಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡು ಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ.

ಉಭಯ ಶ್ರೀಗಳು ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಭಾರತ್ ಹುಣ್ಣಿಮೆ ಪಾರಮಾರ್ಥಿಕಮಹೋತ್ಸವವೆಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ಭಾದ್ರಪದ ಮಾಸದಲ್ಲಿ ಲಿಂ|| ಶ್ರೀ.ಶಂಭುಲಿಂಗ ಶಿವಾಚಾರ್ಯರ ಪುಣ್ಯಾರಾಧನೆ ಮಹೋತ್ಸವ ನಡೆಯುತ್ತವೆ.

Swamiji

Swamiji Name :
ಶ್ರೀ ಷ.ಬ್ರ. ವಿದ್ಯಾನಂದ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
6-1937
Place :
ವಿಜಯಪುರ (ತಾ||)
Pattadikara :
3-5-1958
Photo :
Swamiji Name :
ಶ್ರೀ ಷ.ಬ್ರ. ರೇಣುಕ ಸದಾಶಿವ ಶಿವಾಚಾರ್ಯ ಸ್ವಾಮಿಗಳು
Date of Birth :
26-2-1971
Place :
ಹಾವೇರಿ (ತಾ||)
Pattadikara :
12-12-2013
Photo :

Programs

ಭಾರತ ಹುಣ್ಣಿಮೆಗೆ ಪಾರಮಾರ್ಥಿಕ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ಒಂದು ತಿಂಗಳು ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಭಾದ್ರಪದ ಕೃಷ್ಣ ದ್ವಾದಶಿಗೆ ಲಿಂ. ಶ್ರೀ ಷ.ಬ್ರ. ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ.
ಕಾರ್ತೀಕ ಮಾಸ 2ನೇ ಶುಕ್ರವಾರ ಕಾರ್ತೀಕದ ಸಮಾರೋಪ ಉತ್ಸವ.

Institutions

ಪ್ರೌಢ ಶಾಲೆ ಪದವಿ ಪೂರ್ವ ಕಾಲೇಜು ಡಿ.ಎಡ್., ಕಾಲೇಜು
ಪ್ಯಾರಾ ಮೆಡಿಕಲ್ ಕಾಲೇಜು

Photos

Full Address Kannada

ಶ್ರೀ ಯೋಗಾಶ್ರಮ,
ಹುಲಿಯಾಳ - 587 301
ಜಮಖಂಡಿ ತಾ||, ಬಾಗಲಕೋಟೆ ಜಿ||

Map

Near by Places

ಯೋಗಾಶ್ರಮ ಕ್ರಾಸ್ - 2 ಕಿ.ಮೀ.
ಜಮಖಂಡಿ - 6 ಕಿ.ಮೀ.
ಮುಧೋಳ - 15 ಕಿ.ಮೀ.
ಬಾಗಲಕೋಟ - 80 ಕಿ.ಮೀ.

Statistic

9 Views
0 Rating
0 Favorite
0 Share
error: Content is protected !!