Shree Ole Matha

Shree Ole Matha

ಶ್ರೀ ಓಲೇಮಠ

Average Reviews

Description

ಶ್ರೀ ಓಲೇಮಠ, ಜಮಖಂಡಿ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಮಧ್ಯಭಾಗದಲ್ಲಿರುವ ಶ್ರೀ ಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳಿಂದ ಸ್ಥಾಪನೆಗೊಂಡಿರುವ ಶ್ರೀ ಓಲೇಮಠವು ವಿರಕ್ತ ಪರಂಪರೆಯ ಮಠವಾಗಿದ್ದು ಇಂದು ನಾಡಿನ ಪ್ರಮುಖ ಮಠಗಳಲ್ಲಿ ಒಂದಾಗಿದೆ. ಶ್ರೀಮಠವು 12ನೇ ಶತಮಾನದ ಶರಣರ ಸಾಹಿತ್ಯವನ್ನು ಭದ್ರವಾಗಿ ಸಂಗ್ರಹಿಸಿಡುವ ಮಠವಾಗಿತ್ತು ಈ ಕಾರಣದಿಂದಾಗಿಯೇ ಶ್ರೀ ಓಲೇ ಮಠ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಶ್ರೀ ಗುರುಸಿದ್ದ ಸ್ವಾಮಿಗಳು 17ನೇ ಶತಮಾನದಲ್ಲಿ ಈ ಮಠವನ್ನು ಸ್ಥಾಪಿಸಿರ ಬಹುದೆಂದು ಅಂದಾಜಿಸಲಾಗಿದೆ. ಆದರೆ ಕೆಲ ಮೂಲಗಳ ಪ್ರಕಾರ ಶ್ರೀಮಠವು ಆ ಮೊದಲೇ

ಅಸ್ತಿತ್ವದಲ್ಲಿದ್ದು ಬಹುಖಾಲ ಖಾಲಿ ಉಳಿದಿದ್ದಿರಬಹುದು. ತದನಂತರ ಶ್ರೀ ಗುರುಸಿದ್ದ ಸ್ವಾಮಿಗಳು ಪುನರ್‍ಸ್ಥಾಪಿಸಿ ಪರಂಪರೆಯನ್ನು ಮುಂದುವರೆಸಿದರೆಂದು ಹೇಳಲಾಗಿದೆ. ಶ್ರೀಗಳು ತಮ್ಮ ಧಾರ್ಮಿಕ ಆಚರಣೆಗಳಿಂದ ಭಕ್ತರನ್ನು ಸಂಪಾದಿಸಿಕೊಂಡು ಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಪ್ರಚುರಗೊಳಿಸಿ

ದ್ದಾರೆ. ಶ್ರೀಗಳು ನಾಡಿನಾದ್ಯಂತ ಶಾಖಾ ಮಠಗಳನ್ನು ಸ್ಥಾಪಿಸಿ ಅವುಗಳ ಮೂಲಕ ವೀರಶೈವ

ಧರ್ಮಪ್ರಸಾರ ಕಾರ್ಯ ಕೈಗೊಂಡಿದ್ದಾರೆ. ಶ್ರೀಗಳಿಗೆ ಜಮಖಂಡಿ ಸಂಸ್ಥಾನದ ಕೊಣ್ಣೂರು

ದೇಸಾಯಿಯವರು 1730ರಲ್ಲಿ 190ಎಕರೆ ಜಮೀನನ್ನು ಉಂಬಳಿಯಾಗಿ ದಾನ ನೀಡಿದ್ದಾ

ರೆಂದು ಹೇಳಲಾಗಿದ್ದು ಆದ್ದರಿಂದ ಶ್ರೀಮಠದ ಅಭಿವೃದ್ಧಿಗೆ ಕಾರಣವಾಗಿದೆ.

ಕರ್ತೃಗುರುಗಳ ನಂತರದ ಪರಂಪರೆಯಲ್ಲಿ 10 ಜನ ಸ್ವಾಮಿಗಳು ಅಧಿಕಾರಕ್ಕೆ

ಬಂದಿದ್ದು ಈಗಿನವರು 11ನೇಯವರೆಂದು ಹೇಳಲಾಗುತ್ತದೆ. ಆದರೆ ಆ ಬಗ್ಗೆ ನಿಖರ ಮಾಹಿತಿ

ಸಿಗುವುದಿಲ್ಲ. ಪರಂಪರೆಯಲ್ಲಿ ಬಂದಿರುವ ಶ್ರೀ ಚನ್ನವೀರಸ್ವಾಮಿಗಳು ಸಂತ ಶಿಶುನಾಳ

ಶರೀಫರ ಸಮಕಾಲೀನರೆಂದು ಗುರುತಿಸಲಾಗಿದ್ದು, ಶ್ರೀಗಳು ಶ್ರೀಮಠವನ್ನು ಹೆಚ್ಚು ಪ್ರಚಲಿತಕ್ಕೆ

ತಂದು ಶ್ರೀಮಠದ ಶಾಖಾ ಮಠವಾದ ಹುಲುಗೂರಿನ ಮಠದಲ್ಲಿ ಲಿಂಗೈಕ್ಯರಾಗಿದ್ದಾರೆ.

ಹಿಂದಿನ ಶ್ರೀಗಳಾದ ಶ್ರೀ ಎರಡನೇ ಸಂಗನಬಸವ ಸ್ವಾಮಿಗಳು ತಮ್ಮ ಚಿಕ್ಕವಯಸ್ಸಿ

ನಲ್ಲಿಯೇ ಹಾರನಹಳ್ಳಿಯ ಶ್ರೀ ನೀಲಲೋಚನ ಸ್ವಾಮಿಗಳಿಂದ ಪಟ್ಟಾಧಿಕಾರದ ಅನುಗ್ರಹ

ಪಡೆದು ಶ್ರೀ ಓಲೇಮಠದ ಅಧಿಕಾರಕ್ಕೆ ಬಂದಿದ್ದಾರೆ. ಶ್ರೀಗಳು ಶ್ರೀಮಠದ ಅಧಿಕಾರ

ವಹಿಸಿಕೊಂಡ ನಂತರ ವಿದ್ಯಾಭ್ಯಾಸ ಮುಂದುವರೆಸಿ ಶಿವಯೋಗ ಮಂದಿರ, ಕಾಶಿಗಳಲ್ಲಿ

ವಿದ್ಯಾಭ್ಯಾಸ ಮಾಡಿ “ವೇದಾಂತಾಚಾರ್ಯ” ಎಂಬ ಪದವಿಯನ್ನು ಪಡೆದವರು.

ನಂತರದಲ್ಲಿ 1971ರಲ್ಲಿ ಹಿಂದಿಯಲ್ಲಿ ಎಂ.ಎ. ಪದವಿ ಪಡೆದ ಶ್ರೀಗಳು ಶ್ರೀಮಠದ

ಅಧಿಕಾರವನ್ನು ನಡೆಸುತ್ತಿರುವಾಗಲೇ 1972ರಲ್ಲಿ ಹೊಸಪೇಟೆಯ ಹೇಮಕೂಟ ಮಠದ

ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ.

ತದನಂತರ ಶ್ರೀಮಠವು ಮತ್ತೊಮ್ಮೆ ಖಾಲಿ ಉಳಿದಿದ್ದು ಆ ಸಂದರ್ಭದಲ್ಲಿ

ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯುಕ್ತಿಗೊಂಡವರು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.

ಡಾ. ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು. ಶ್ರೀಗಳು ಮಠಕ್ಕೆ ನೇಮಕಗೊಂಡು

ವಿದ್ಯಾಭ್ಯಾಸ ಮುಂದುವರೆಸಿ ಶಿವಯೋಗ ಮಂದಿರ, ಕಾಶಿ ವಿದ್ಯಾಪೀಠಗಳಲ್ಲಿ ಸಂಸ್ಕøತ ಮತ್ತು

ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ತಿರುಪತಿ ವಿಶ್ವವಿದ್ಯಾನಿಲಯದಿಂದ ಆಚಾರ್ಯ

ಪದವಿ ಪಡೆದವರು. ಹಾಗೂ ಹಂಪೆಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ “ಮಗ್ಗೆಯ

ಮಾಯಿದೇವನ ಶಿವಾನುಭವ ಸೂತ್ರ – ಒಂದು ಅಧ್ಯಯನ” ಎಂಬ ಮಹಾಪ್ರಬಂಧವನ್ನು

ಮಂಡಿಸಿ ಪಿ.ಎಚ್.ಡಿ. ಪದವಿಯನ್ನು ಪಡೆದರು.

ಶ್ರೀಗಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠಕ್ಕೆ ಹಿಂತಿರುಗಿ ಸಾಮಾಜಿಕ

ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಳ್ಳಿಹಳ್ಳಿಗಳಿಗೆ ಪಾದಯಾತ್ರೆ ನಡೆಸಿ ಜನಜಾಗೃತಿ

ಮಾಡಿದವರು. ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲು ಭಕ್ತರ

ಸಹಕಾರದಿಂದ ಯಶಸ್ವಿಯಾಗಿದ್ದು ಆ ನಂತರವಷ್ಟೇ 1997ರಲ್ಲಿ ಶ್ರೀಮಠದ ಪಟ್ಟಾಧಿಕಾರ

ವನ್ನು ಸ್ವೀಕರಿಸಿದರು. ಮೊದಲಿನಿಂದಲೂ ಸಾಮಾಜಿಕ ಕಳಕಳಿಯ ಶ್ರೀಗಳು ಹೋರಾಟಗಳಲ್ಲಿ

ಭಾಗವಹಿಸುತ್ತಾ ಈ ಭಾಗದ ಜನರ ಧ್ವನಿಯಾಗಿದ್ದಾರೆ. ಅಲ್ಲದೆ ಜಮಖಂಡಿ ಜಿಲ್ಲೆ ಹೋರಾಟ

ಸಮಿತಿಯ ನೇತೃತ್ವವನ್ನು ವಹಿಸಿಕೊಂಡು ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.

ಶ್ರೀಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕವಾಗಿಯೂ ನಾಡಿನ

ಹೆಮ್ಮೆಯ ಗುರುಗಳಾಗಿದ್ದು “ಬಸವಭಾವದ ಸುತ್ತಮುತ್ತ”, “ಶರಣ ಸಾಂಗತ್ಯ”, “ಮನಸ್ಸು

ಮಾತು ಕೇಳಿದಾಗ” ಮುಂತಾದ 50ಕ್ಕೂ ಹೆಚ್ಚು ರಚನೆಗಳನ್ನು ಕೃತಿಗಳಲ್ಲಿ ಮೂಡಿಸಿ

ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ.

ವಿಷೇಶತೆಗಳು :

ಸಂಚಾರಿ ಪಾದಯಾತ್ರೆ, ಸಂಚಾರಿ ಶಿವಾನುಭವ

ಕೃಷಿ, ಆರೋಗ್ಯ ಮತ್ತು ಆಧ್ಯಾತ್ಮ ಗೋಷ್ಠಿ

ಪಾರಮಾರ್ಥಿಕ ಉತ್ಸವ (ಕಂಕನವಾಡಿ ಗ್ರಾಮದಲ್ಲಿ)

ಶ್ರೀ ಗುರು ಕುಮಾರೇಶ್ವರ ಗ್ರಂಥಮಾಲೆ – ಶ್ರೀ ಓಲೇಮಠ, ಜಮಖಂಡಿ.

(ಇಲ್ಲಿಯವರೆಗೆ 50ಕ್ಕೂ ಹೆಚ್ಚಿನ ಪುಸ್ತಕಗಳ ಪ್ರಕಟಣೆ.)

Swamiji

Swamiji Name :
ಶ್ರೀ ಮ.ನಿ.ಪ್ರ. ಡಾ. ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು
Date of Birth :
15-6-1962
Place :
ಬಿದರಿ, ಜಮಖಂಡಿ ತಾ||
Pattadikara :
10-2-1997
Photo :

Programs

ಬಸವ ಜಯಂತಿಗೆ ವಿಶೇಷ ಕಾರ್ಯಕ್ರಮಗಳು.
ಶ್ರಾವಣದಲ್ಲಿ ಪ್ರತಿನಿತ್ಯ ಪುರಾಣ ಪ್ರವಚನ ಹಾಗೂ ವಿಶೇಷ ಪೂಜೆ.
ಕಾರ್ತೀಕದ ಕೊನೇ ದಿನ ಕಾರ್ತಿಕೋತ್ಸವ.

Institutions

ಪೂರ್ವ ಪ್ರಾಥಮಿಕ ಶಾಲೆ. ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ. ಪದವಿ ಪೂರ್ವ / ಪದವಿ ಕಾಲೇಜು. ಡಿ.ಎಡ್., / ಬಿ.ಎಡ್., / ಸಿ.ಪಿ.ಎಡ್. ಕಾಲೇಜು.

Photos

Full Address Kannada

ಶ್ರೀ ಓಲೇಮಠ,
ಜಗದಾಳ - 587 311,
ಜಮಖಂಡಿ ತಾ||, ಬಾಗಲಕೋಟೆ ಜಿ||

Map

Near by Places

ರಬಕವಿ - 2 ಕಿ.ಮೀ, ಬನಹಟ್ಟಿ - 3 ಕಿ.ಮೀ. ಜಮಖಂಡಿ - 25 ಕಿ.ಮೀ. ಮುಧೋಳ - 20 ಕಿ.ಮೀ.

Statistic

42 Views
0 Rating
0 Favorite
2 Shares
error: Content is protected !!